July-27-2025

ಬಡ ಪಿಎಸ್ಐ ಶಾಸಕನಾದ ರೋಚಕ ಹಾದಿ - ಪಿ ರಾಜೀವ್
ಶಿವಮೊಗ್ಗ ಜಿಲ್ಲೆ ಸೊರಬದಲ್ಲಿ ಹುಟ್ಟಿ, ಅಲ್ಲೇ ಪಿಯುಸಿ ತನಕ ಓದಿ, ಡಿಗ್ರಿ ಧಾರವಾಡದಲ್ಲಿ ಮುಗಿಸಿದ ಪಿ ರಾಜೀವ್ ಅಂಗೈ ಅಗಲದ ಬದುಕನ್ನು ಕಟ್ಟಿಕೊಂಡು ಬಂದ ಹಾದಿ ರೋಚಕ. ಕೇವಲ 30 ರೂಪಾಯಿ ನೀಡಿ, ನೌಕರ ಭವನ ಬೆಂಗಳೂರಿನಲ್ಲಿ ರಾತ್ರಿ ಕಳೆದು ಸರಕಾರಿ ನೌಕರಿ ಗಿಟ್ಟಿಸಿಕೊಂಡು, 2003 ಪೊಲೀಸ್ ಅಧಿಕಾರಿ ಆಗಿದ್ದೆ ಒಂದು ರೀತಿ ತ್ರಿಲ್ಲಿಂಗ್!. ಪೊಲೀಸ್ ಟ್ರೈನಿಂಗ್ ಮುಗಿಸಿ 2005 ರಲ್ಲಿ ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ನೌಕರಿ ಸೇರಿದವರು ಪಿ ರಾಜೀವ್. ಅತಿ ಬುದ್ದಿವಂತ.ತುಂಬಾ ಓದಿದ್ದಾರೆ. ಇತಿಹಾಸ ಓದುವುದರಿಂದ ಹಿಡಿದು ಇತಿಹಾಸ ನಿರ್ಮಿಸುವ ತನಕ ಮನಸ್ಸು ಮತ್ತು ತಲೆಗೆ ಅಕ್ಷರ ತುಂಬಿಸಿದ್ದಾರೆ. ಹೀಗಾಗಿ ಜೀವನದ ಕಷ್ಠ ಕಾರ್ಪಣ್ಯಗಳ ಅರಿವಿದೆ. ಕಾಲೇಜು ಓದುವಾಗಲೇ ಇವರದ್ದು ರೆಬೆಲ್ ತಿಂಕಿಂಗ್! ಹೀಗಾಗಿಯೆ ಇರಬೇಕು, ಕಾಲೇಜು ಓದುವಾಗಲೇ ಒಂದು ರೂಪಾಯಿ ಲಂಚ ನೀಡದೆ ಸರ್ಕಾರಿ ನೌಕರಿ ಸೇರಬೇಕು ಎಂದು ದೃಡ ನಿರ್ಣಯ ಮಾಡಿದ್ದ ರಾಜೀವ್ ಮುಂದೆ ಸರ್ಕಾರಿ ನೌಕರಿ ಮಾತ್ರ ಅಲ್ಲ, ಶಾಸನ ರಚನೆ ಮಾಡುವ ಸಭೆಯಲ್ಲಿ ಒಬ್ಬ ಸದಸ್ಯ ( ಶಾಸಕ) ಆಗಿದ್ದು ಬಹಳ ಆಶ್ಚರ್ಯ ಮತ್ತು ಸಾಧನೆ.
#ಒಂದೇ_ವರ್ಷದಲ್ಲಿ_ಚುನಾವಣೆಗೆ
ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣೆಯಿಂದ ಬೆಳಗಾವಿ ಜಿಲ್ಲೆ ಕುಡುಚಿಗೆ ವರ್ಗಾವಣೆಗೊಂಡ ರಾಜೀವ್ ಹೆಗಲಿಗೆ ಒಂದು ಬ್ಯಾಗ್ ಏರಿಸಿಕೊಂಡು ಹೋಗವಾಗಲೂ ಇದ್ದ ಆಸ್ತಿ ಅಂದರೆ ಒಂದಿಷ್ಟು ಬಟ್ಟೆ ಬರೆ. ಕುಡುಚಿ ತಲುಪಿದ ಮೇಲೆ ಅಲ್ಲಿ ಗಳಿಸಿದ ಬಹುದೊಡ್ಡ ಆಸ್ತಿ ಎಂದರೆ ಜನ ಸಂಪಾದನೆ. ಅದು ಎಷ್ಟರ ಮಟ್ಟಿಗಿನ ಸಂಪಾದನೆ ಎಂದರೆ ಕೇವಲ ಒಂದೇ ವರ್ಷದಲ್ಲಿ ವಿಧಾನಸಭೆ ಚುನಾವಣೆ ಎದುರಿಸುವಷ್ಟು ಗಟ್ಟಿ ಆಗಿದ್ದರು ಎಂದರೆ ಹುಡುಗಾಟ ಅಲ್ಲ. 2008 ರಲ್ಲಿ ಸ್ವತಂತ್ರ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡುತ್ತಾರೆ. 22 ಸಾವಿರ ಮತ ಪಡೆದು ಸೋಲುತ್ತಾರೆ. ಆಗಲೇ ಬಿಜೆಪಿ ಇಂದ ಟಿಕೆಟ್ ಬಯಸಿದ್ದರೂ ಬಿಜೆಪಿ ಅವರಿಗೆ ಟಿಕೆಟ್ ನಿರಾಕರಣೆ ಮಾಡುತ್ತದೆ. ಒಂದು ವೇಳೆ ಬಿಜೆಪಿ ಇಂದ ಅವರಿಗೆ ಟಿಕೆಟ್ ನೀಡಿದ್ದರೆ ರಾಜೀವ್ ಕಷ್ಟ ಪಡದೆ ಗೆಲ್ಲುತ್ತಿದ್ದರು. ಕಾರಣ ಆ ಚುನಾವಣೆಯಲ್ಲಿ ಬಿಜೆಪಿ 28 ಸಾವಿರ ಮತ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ 29 ಸಾವಿರ ಮತ್ತು ಸ್ವತಂತ್ರ ಅಭ್ಯರ್ಥಿ ರಾಜೀವ್ 22 ಸಾವಿರ ಮತ ಗಳಿಸಿ ಸೋತಿದ್ದರು.
#ಶ್ರೀರಾಮಲು_ಪಕ್ಷದ_ಶಾಸಕ
ಮುಂದೆ 2013 ರಲ್ಲಿ ಬಿ ಶ್ರೀರಾಮಲು ಅವರ ಬಿಎಸ್ಆರ್ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿದ ರಾಜೀವ್ ಗೆದ್ದು ವಿಧಾನಸೌಧಕ್ಕೆ ಕಾಲಿಟ್ಟರು. ಆದರೆ 2008 ರಲ್ಲಿ ಚುನಾವಣೆ ಸ್ಪರ್ಧೆ ಮಾಡುವ ಸಲುವಾಗಿ ಸರ್ಕಾರಿ ನೌಕರಿ ಬಿಟ್ಟು ರಾಜಕೀಯ ಎಂಟ್ರಿ ನೀಡಿದ್ದರಲ್ಲ .ಬದುಕು ಸುಲಭವೆ. 2008 ರಲ್ಲಿ ಸೋಲಾದ ಬಳಿಕ ಮನೆಗೆಲಸಕ್ಕೆ ಬರುತ್ತಿದ್ದ ಕೆಲಸದಾಕೆಯನ್ನು ನಾಳೆಯಿಂದ ಬರಬೇಡ ಅಂದರು. ಕಾರಣ ಸಂಬಳ ನೀಡಬೇಕಲ್ಲ.ಕೈಯಲ್ಲಿ ಕೆಲಸ ಇಲ್ಲ. ತನ್ನ ಹೊಟ್ಟೆ ತುಂಬಿಕೊಳ್ಳೊದೆ ಹೆಚ್ಚು ಇನ್ನು ಬೇರೆಯವರ ಹೊಟ್ಟೆಗೆ ಹಣ ನೀಡುವ ಸ್ಥಿತಿ ರಾಜೀವ್ ಗೆ ಇರಲಿಲ್ಲ.
#ಗೆಳೆಯ_ನೀಡಿದ_ಐದುಸಾವಿರ
ಆಯ್ತು... ಸೋಲಾಯ್ತು. ರಾಜಕೀಯದಲ್ಲಿ ಮೊದಲ ಬಾರಿಗೆ ಸೋತವನ ಸ್ಥಿತಿ ಯಾರಿಗೂ ಬೇಡ.( ದುಡ್ಡಿಲ್ಲದವನಿಗೆ) ಮೊದಲ ಚುನಾವಣೆಯಲ್ಲಿ ಸೋತ ರಾಜೀವ್'ನ ನೋಡಲು ಒಮ್ಮೆ ಸ್ನೇಹಿತರು ಬೆಂಗಳೂರು ಬರ್ತಾರೆ. ಬೆಂಗಳೂರಿನಲ್ಲಿ ಇದ್ದ ರಾಜೀವ್ ಕೈಯಲ್ಲಿ ಹಣ ಇಲ್ಲ. ಬೆಳಗ್ಗೆ ತಿಂಡಿ ಕೊಡಿಸೋಕೆ ಹಣ ಇಲ್ಲದ ಸಮಯದಲ್ಲಿ ಅವರ ಪೊಲೀಸ್ ಸ್ನೇಹಿತ ಶ್ರೀಧರ್ ಪೂಜಾರ್ ( CCB inspector) ಬಳಿ 5 ಸಾವಿರ ಸಾಲ ಪಡೆದು ಅತಿಥಿಗಳಿಗೆ ಬೆಳಗಿನ ಉಪಹಾರ ಕೊಡಿಸಿದ್ದು ಇದೇ ರಾಜೀವ್.
#2013ರಲ್ಲಿ_ಗೆಲುವು
ಇಷ್ಟೆಲ್ಲಾ ಕಷ್ಟ ಪಟ್ಟ ರಾಜೀವ್ ಮುಂದೆ 2013 ರಲ್ಲಿ ಮತ್ತೆ ಚುನಾವಣೆ ಸ್ಪರ್ಧೆ.ಆಗ ಗೆಲುವು. 2018 ರಲ್ಲಿ ಬಿಜೆಪಿ ಇಂದ ಸ್ಪರ್ಧೆ ಆಗಲೂ ಗೆಲುವು .ಈ ಬಾರಿ ಅಂದರೆ 2023 ರ ವಿಧಾನಸಭೆ ಚುನಾವಣೆಯಲ್ಲಿ ಸೋಲು.! ಅಷ್ಟಕ್ಕೂ ಶಾಸಕ ಆಗಬೇಕು. ರಾಜಕೀಯ ಸೇರಲೇಬೇಕು ಎಂದು ಕನಸು ಕಂಡವರಲ್ಲ ರಾಜೀವ್. ಅದೊಂದು ರೋಚಕತೆ ಇರುವ ಪ್ರಸಂಗ.
#ನೀನು_ಕೇವಲ_ಪೊಲೀಸ್_ಅಧಿಕಾರಿ_ನಾನು_ಶಾಸಕ!
ಕುಡುಚಿಗೆ ಹೋದಾಗ ಪಿ ರಾಜೀವ್ ಸಣ್ಣ ಪುಟ್ಟ ತಪ್ಪು ಮಾಡಿ ಜೈಲಿಗೆ ಸೇರಿದವರ ಜೊತೆ ಮಾತುಕತೆ ಮಾಡ್ತಾ ಇದ್ರಂತೆ. ಬದುಕಿನ ಬಗ್ಗೆ ಪಾಠ ಮಾಡೋದು. ಅವರನ್ನು ಸರಿದಾರಿಗೆ ತರುವ ಕೆಲಸ ಮಾಡ್ತಾ ಇದ್ದರು. ಕೈದಿಗಳು ಎನಿಸಿಕೊಂಡವರು ಮುಂದೆ ಎಷ್ಟು ಬದಲಾದರು ಎಂದರೆ ಪಿ ರಾಜೀವ್ ಚುನಾವಣೆ ನಿಂತಾಗ ಅದೇ ಸಣ್ಣ ಪುಟ್ಟ ತಪ್ಪು ಮಾಡಿದವರು ಮುಂದೆ ಜೈಲಿಂದ ಬಿಡುಗಡೆ ಆದ ಮೇಲೆ ಅವರ ಪರವಾಗಿ ಚುನಾವಣೆ ಪ್ರಚಾರ ಕೂಡ ಮಾಡಿದ್ರು ಎಂದರೆ ನಂಬಲೇ ಬೇಕು.! ಅಷ್ಟಕ್ಕೂ ರಾಜೀವ್ ಅವರು ಚುನಾವಣೆಗೆ ಬರೋದಕ್ಕೆ ಕಾರಣ ಇದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಶ್ಯಾಮ ಭೀಮ ಘಾಟೆ ಜೊತೆ ಸಣ್ಣ ವಿಚಾರಕ್ಕೆ ಗಲಾಟೆ ಆಗುತ್ತದೆ. ಆಗ ಭೀಮ ಘಾಟೆ ಅಂದು ಸಬ್ ಇನ್ಸ್‌ಪೆಕ್ಟರ್ ಆಗಿದ್ದ ರಾಜೀವ್ ಗೆ ಅವಾಜ್ ಬಿಡ್ತಾರಂತೆ. ನಾನು ಹೇಳಿದ ಹಾಗೆ ನೀನು ಕೆಲಸ ಮಾಡಬೇಕು. ನಾನು ಶಾಸಕ. ನೀನು ಅಧಿಕಾರಿ ಎಂದಾಗ ಪಿ ರಾಜೀವ್ ಎದುರು ಉತ್ತರ ನೀಡುತ್ತಾರಂತೆ. ನೀನು ಈಗ ಶಾಸಕ. ಮನಸ್ಸು ಮಾಡಿದರೆ ನಾನು ನಾಳೆ ಶಾಸಕ ಆಗಬಹುದು. ಆದರೆ ನೀನು ಸಬ್ ಇನ್ಸ್‌ಪೆಕ್ಟರ್ ಆಗೋಕೆ ಆಗಲ್ಲ ನೆನಪಿರಲಿ ಎಂದು, ರಾಜೀವ್ ಧಮಕಿ ರೂಪದಲ್ಲಿ ಎಚ್ಚರಿಕೆ ನೀಡಿದ್ರಂತೆ. ಸೀನ್ ಕಟ್ ಮಾಡಿದ್ರಿ ಒಮ್ಮೆ ರಾಜೀವ್ ತಾನು ಆಕ್ರೋಶದಲ್ಲಿ ನೀಡಿದ್ದ ಹೇಳಿಕೆಯಂತೆ 2013 ರಲ್ಲಿ ಶಾಸಕರಾದರು. ಒಂದಲ್ಲ ಎರಡು ಬಾರಿ ವಿಧಾನಸೌಧಕ್ಕೆ ಬಂದರು. ಸಾಧನೆ ಎಂದರೆ ಇದೆ ಅಲ್ಲವೇ?
#ರಾಜೀವ್_ಸೋಲಿಗೆ_ಕಾರಣ_ಹಲವು
ಈ ಬಾರಿ ಸೋತಿದ್ದಾರೆ. ಅದಕ್ಕೆ ಅನೇಕ ರಾಜಕೀಯ ಕಾರಣ ಇದೆ. ಅದು ಬಿಡಿ ಅದನ್ನು ಬರೆದರೆ ಮತ್ತಷ್ಟು ಉದ್ದ ಆಗುತ್ತದೆ. ಆದರೆ ಶಾಸಕನೊಬ್ಬ ಅಧಿಕಾರಿಗೆ ನೀಡಿದ ಸವಾಲನ್ನು ಸ್ವೀಕಾರ ಮಾಡಿ ಶಾಸಕನಾದ ಕಥೆಯೇ ರೋಚಕ ಅಲ್ಲವೇ. ಅವರು ಅನೇಕ ಬಡ ಮಕ್ಕಳಿಗೆ ಶಾಸಕ ಆಗಿದ್ದ ವೇಳೆ ಓದಿಸಿದ್ದಾರೆ. ಅವರು ಸರ್ಕಾರದ ನೌಕರಿ ಪಡೆಯುವ ತನಕ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡಿದ್ದಾರೆ. ಸದನದಲ್ಲಿ ನಿಂತು ಪಾಯಿಂಟ್ ಬಾಯ್ ಪಾಯಿಂಟ್ ಮಾತನಾಡುತ್ತಿದ್ದ ಮಾಜಿ ಪೊಲೀಸ್ ಆಫೀಸರ್, ಬಿಜೆಪಿಗೆ ಆಸ್ತಿಯಾಗುವಂತೆ ಗುರುತಿಸಿಕೊಂಡಿದ್ದರು. ಆದರೆ ಈ ಬಾರಿ ಸೋತಿದ್ದಾರೆ. ಚುನಾವಣೆ ರಾಜಕೀಯದಲ್ಲಿ ಸೋಲು ಗೆಲವು ಎಲ್ಲಾ ಮಾಮೂಲಿ ಬಿಡಿ. ಸೋತ ಮಾತ್ರಕ್ಕೆ ವ್ಯಕ್ತಿತ್ವ ಕುಂದಲ್ಲ. ಯಾರೋ ಗೆದ್ದ ಮಾತ್ರಕ್ಕೆ ಸಾಧಕನ ಶ್ರಮ ವ್ಯರ್ಥವಾಗುವುದಿಲ್ಲ.. ಇಂದಿನ ರಾಜಕೀಯ ವ್ಯವಸ್ಥೆ ಹಾಗೆ ಇದೆ. ವಾಜಪೇಯಿ ಅಂತ ವಾಜಪೇಯಿ ಸೋತಿದ್ದರು. ದೇವೆಗೌಡರು ಕೂಡ ಸೋಲಿನ ದಡದಲ್ಲಿ ಕುಳಿತೆದ್ದು ಬಂದವರು. ಯಡಿಯೂರಪ್ಪ, ಸಿದ್ದರಾಮಯ್ಯ, ಈಶ್ವರಪ್ಪ, ಸಿಟಿ ರವಿ, ಮಾಧುಸ್ವಾಮಿ, ಮಲ್ಲಿಕಾರ್ಜುನ ಖರ್ಗೆ ಹೀಗೆ ಅನೇಕ ನಾಯಕರು ಚುನಾವಣೆ ರಾಜಕೀಯದಲ್ಲಿ ಸೋಲು ಹೇಗಿರುತ್ತದೆ ಎಂದು ಕಂಡಿದ್ದಾರೆ. ಆದರೆ ಸೋತವರಲ್ಲೂ ಪ್ರೇರಣಾದಾಯಿ ಕತೆ ಇರುತ್ತದೆ. ಅಂತಹ ಪ್ರೇರಣೆ ಪಿ ರಾಜೀವ್ ಅವರಲ್ಲಿ ನೀವು ಕಾಣಬಹುದು. ಅದು ಅನೇಕರ ಸಾಧನೆಗೆ ದಾರಿ ಕೂಡ ತೋರಬಹುದು ಎನ್ನೋದು ನನ್ನ ಭಾವನೆ.
ಪಿ ಮೊಯಿಲಿ
ಸಂಗ್ರಹ

Share