April-10-2025

ಅಲ್ಲಿ ಹೋರಾಟವಿಲ್ಲ, ಅಲ್ಲಿ ಬೇಳೆ ಬೇಯಿಸುವಿಕೆ ಇಲ್ಲ, ಅಲ್ಲಿ ದೋಷಾರೋಪಣೆ ಇಲ್ಲ, ಅಲ್ಲಿ ದಿನನಿತ್ಯದ ಅಳು, ರೋಧನೆ ಇಲ್ಲ,
ಅಲ್ಲಿ ಇದ್ದದ್ದು ಒಂದೇ ಒಂದು.. ಅದುವೇ.
ಶಂಕರನಾರಾಯಣ ಎಂಬ ವ್ಯಕ್ತಿ ತನ್ನ ಮಗಳ ಅತ್ಯಾಚಾರಿಗೆ ತಾನೇ ಜಾರಿಗೊಳಿಸಿದ ಶಿಕ್ಷೆ.!!
2001ರಲ್ಲಿ ಕೇರಳದ ಮಲಪ್ಪುರಂ ಜಿಲ್ಲೆಯ ಮಂಚೇರಿ ಎಂಬಲ್ಲಿ ಹದಿಮೂರು ವರ್ಷ ಹರೆಯದ ಕೃಷ್ಣಪ್ರಿಯ ಎಂಬ ಹೆಣ್ಮಗಳ ಮೇಲೆ ಅತಿ ಕ್ರೂರವಾಗಿ ಅತ್ಯಾಚಾರ/ಕೊಲೆ ನಡೆದಿತ್ತು. ಅಂದು ಪ್ರಕಟವಾದ ಎಲ್ಲ ಪತ್ರಿಕೆಗಳಲ್ಲಿ ಕೃಷ್ಣಪ್ರಿಯಳ ಅತ್ಯಾಚಾರ ವರದಿ ಮತ್ತು ಅಳುತ್ತಿರುವ ತಂದೆಯ ಚಿತ್ರವನ್ನು ನೋಡಿ ಕೇರಳ ಬೆಚ್ಚಿಬಿದ್ದಿತ್ತು.
ತನ್ನ ಚಿಕ್ಕ ಹೆಣ್ಮಗಳನ್ನು ಅತ್ಯಾಚಾರ ಮಾಡಿ ಕೊಂದಿದ್ದನ್ನು ಕೇಳಿದಾಗ ಆ ತಂದೆಯೊಳಗೆ ಎಂತಹ ಬೆಂಕಿ ಹೊತ್ತಿಕೊಂಡಿತ್ತು ಎಂಬುದನ್ನು ಪ್ರಬುದ್ಧ ಕೇರಳ ನಂತರ ಮೂಗಿಗೆ ಬೆರಳಿಟ್ಟು ನೋಡಿತ್ತು.
ಬೆಳಿಗ್ಗೆ ಕೈಬೀಸಿ ಶಾಲೆಗೆ ಕಳುಹಿಸಿದ ಮಗು ಅದು. ಆ ಅಪ್ಪನ, ಆ ಮಗುವಿನ ಕನಸು, ಭರವಸೆಗಳನ್ನೆಲ್ಲ ಕ್ಷಣಮಾತ್ರದಲ್ಲಿ ಆ ಅತ್ಯಾಚಾರಿ ಇಲ್ಲದಾಗಿಸಿದ್ದ.
ಆದರೆ ತನ್ನ ಜೀವದ ಜೀವವೇ ಆಗಿದ್ದ ಮಗಳನ್ನು ಕಳೆದುಕೊಂಡ ಆ ತಂದೆಯ ನೋವಿನ ಮುಂದೆ ನಗುತ್ತಾ ಕೊಲೆಗಾರ ಅಹ್ಮದ್ ಕೋಯಾ ನ್ಯಾಯಾಲಯದಲ್ಲಿ ಸಾಕ್ಷಿಗಳ ಕೊರತೆಯಿಂದ ಬಿಡುಗಡೆಗೊಂಡಿದ್ದ.!
ನ್ಯಾಯಾಲಯ ಕೂಡ ಅಂದು ಅಸಹಾಯಕವಾಗಿತ್ತು.
ನ್ಯಾಯಾಲಯದಲ್ಲಿ ಸಾಕ್ಷಿಗಳ ಕೊರತೆ ಆದರೆ ಏನಾಯಿತು, ತನ್ನ ನ್ಯಾಯಾಲಯದಲ್ಲಿ ಯಾವ ಶಿಕ್ಷೆ ಕೊಡಬೇಕೆಂದು ಅಂದೇ ಶಂಕರನಾರಾಯಣರು ತೀರ್ಮಾನ ಮಾಡಿದ್ದರು, ಇಲ್ಲಿ ನ್ಯಾಯ ಬೇಕಿದ್ದರೆ ನಮಗೇ ನಾವೇ ತೆಗದುಕೊಳ್ಳಬೇಕು ವಿನಹ ಯಾರಿಂದಲೂ ನಮಗೆ ನ್ಯಾಯ ಸಿಗದು ಎಂದು, ನ್ಯಾಯಾಂಗದ ಮೇಲೆ ನಂಬಿಕೆ ಕಳೆದುಕೊಂಡ ಶಂಕರನಾರಾಯಣರಿಗೆ ದೇವರು ಅದ್ಯಾವ ರೀತಿಯಲ್ಲಿ ಶಕ್ತಿ ತುಂಬಿದ್ದಾನೋ ಆ ದೇವರೇ ಬಲ್ಲ..
ಸೌಜನ್ಯ ನಂಥ ನೂರಾರು ಹೆಣ್ಣು ಮಕ್ಕಳಂತೆ ತನ್ನ ಮಗಳಿಗೂ ನ್ಯಾಯ ಸಿಗೋದು ಕಷ್ಟ ಅಂತ ಆತನಿಗೂ ಅನ್ನಿಸಿರ್ಬೇಕು. ತನ್ನ ಮುಂದೆ ರಾಜಾರೋಷವಾಗಿ ಓಡಾಡ್ತಾ ಇರೋ ಅಹ್ಮದ್ ಕೋಯನಿಗೆ ಶಿಕ್ಷೆ ಯನ್ನು ಜಾರಿ ಮಾಡುವ ತೀರ್ಮಾನ ತಗೊಂಡ್ರು ಶಂಕರನಾರಾಯಣನ್. 2002 ಜೂಲೈ 27. ಮೊದಲೇ ನಿಶ್ಚಯಿಸಿದಂತೆ ತನ್ನ ಸಿಂಗಲ್ ನಳಿಕೆಯ ಬಂದೂಕಿನಿಂದ ಅಹ್ಮದ್ ಕೊಯನ ಎದೆಯನ್ನ ಸೀಳಿ ಪೊಲೀಸ್ ಠಾಣೆಯಲ್ಲಿ ಶರಣಾದ್ರು ಶಂಕರನಾರಾಯಣನ್.
ಶಂಕರನಾರಾಯಣರು ಆತನ ಮೇಲೆ ತಾನು ವಿಧಿಸಿದ ತೀರ್ಪು ಜಾರಿಗೊಳಿಸಿದ್ದರು..
ಅಹ್ಮದ್ ಕೋಯಾನನ್ನು ಕೊಂದು ಹಾಕಲು ತಮಗೆ ಖಂಡಿತವಾಗಿ ಶಿಕ್ಷೆ ಆಗುತ್ತದೆ ಎಂದು ತಿಳಿದು ಕೂಡ ಶಂಕರನಾರಾಯಣರಿಗೆ ಸಹಾಯ ಮಾಡಲು ಇನ್ನೂ ಎರಡು ವ್ಯಕ್ತಿಗಳು ಜೊತೆ ಸೇರಿದ್ದರು.
ಮಂಜೇರಿ ಸೆಷನ್ಸ್ ನ್ಯಾಯಾಲಯವು ಶಂಕರ ನಾರಾಯಣನ್‌ಗೆ ಜೀವಾವಧಿ ಶಿಕ್ಷೆ ಮತ್ತು ಅಹ್ಮದ್ ಕೋಯನನ್ನು ಕೊಂದು ಹಾಕಲು ಅವರಿಗೆ ಸಹಾಯ ಮಾಡಿದವರಿಗೆ ಮೂರು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿತು. ನ್ಯಾಯಾಲಯ ಶಿಕ್ಷೆ ವಿಧಿಸಿದ್ದರೂ ನಾಗರಿಕ ಸಮಾಜ ಅವರನ್ನು ಮುಕ್ತ ಮನಸ್ಸಿನಿಂದ ಅಭಿನಂದಿಸಿತ್ತು, ಯಾಕೆಂದರೆ ಆ ತಂದೆಯ ಮುಖದಲ್ಲಿ ಮಾತ್ರವಲ್ಲದೆ ಹೆಣ್ಮಕ್ಕಳನ್ನು ಹೊಂದಿದ ಅದೆಷ್ಟೋ ಅಪ್ಪಂದಿರ ಮುಖದಲ್ಲಿ ಅಂದು ನಗು ಮೂಡಿದ ದಿನವಾಗಿತ್ತು.
ನಂತರ 2006 ರಲ್ಲಿ ಶಂಕರನಾರಾಯಣರನ್ನೂ, ಅವರ ಜತೆಗಾರರನ್ನೂ ಹೈಕೋರ್ಟ್ ದೋಷಮುಕ್ತಗೊಳಿಸಿತು. ಅಹ್ಮದ್ ಕೋಯಾನ ಶವ ಪತ್ತೆ ಮಾಡುವಲ್ಲಿ ಪೊಲೀಸರು ತಪ್ಪು ಮಾಡಿದ್ದಾರೆ, ಮತ್ತು ಅಹ್ಮದ್ ಕೋಯಾನು ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದವನು, ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದವನು ಆದ್ದರಿಂದ ಶಂಕರ ನಾರಾಯಣರನ್ನು ಮಾತ್ರ ಆಪಾದಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂಬುದನ್ನು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖ ಮಾಡಿತ್ತು.!
ಚಿಕ್ಕ ಮಕ್ಕಳಿಗೂ ಕೂಡ ಅಹ್ಮದ್ ಕೋಯಾನನ್ನು ಕೊಂದು ಬಿಸಾಕಿದ್ದು ಶಂಕರ ನಾರಾಯಣನ್ ಮತ್ತು ಅವರ ಜತೆಗಾರರು ಕೊಂದಿದ್ದು ಎಂದು ತಿಳಿದಿತ್ತು, ಆದರೂ ನ್ಯಾಯಾಲಯವು ಖುಲಾಸೆಗೊಳಿಸಿತು.
ಅಂದು ಸಾಕ್ಷಿಗಳ ಕೊರತೆಯಿಂದ ಅಸಹಾಯಕವಾಗಿದ್ದ ನ್ಯಾಯಾಲಯವು ಈ ಬಾರಿ ಅದೇ ಅಸಹಾಯಕತನವನ್ನು ಸಂತೃಪ್ತಿಯಿಂದ ತೋರಿಸಿತು.
ತನ್ನ ಜೀವನದ ಭರವಸೆಯ ನೆರಳಾಗಿದ್ದ ಮಗಳನ್ನು ಕೊಂದ ಅಹ್ಮದ್ ಕೋಯಾನನ್ನು ಸಾಕ್ಷಿಗಳ ಕೊರತೆಯಿಂದ ನ್ಯಾಯಾಲಯ ಖುಲಾಸೆಗೊಳಿಸಿದಾಗ ಶಂಕರನಾರಾಯಣರು ಜಾರಿಗೊಳಿಸಬೇಕಾದ ತೀರ್ಪನ್ನು ತಾವೇ ಜಾರಿಗೊಳಿಸಿದರು ವಿನಹ ಮಗಳಿಗೆ ನ್ಯಾಯ ಕೊಡಿಸಲು ಯಾರ ಮುಂದೆಯೂ ಯಾಚಿಸಲು ಹೋಗಿರಲಿಲ್ಲ, ಜೀವನವನ್ನು ಅಂತ್ಯಗೊಳಿಸಲು ಸಿದ್ಧರಿರಲಿಲ್ಲ.
ಇದು ನಿಯಮಗಳ ಮುಂದೆ ಎಷ್ಟು ಸರಿ, ಎಷ್ಟು ತಪ್ಪು ಎಂಬುದಕ್ಕಿಂತ, ಸಮಾಜದಲ್ಲಿ ಶಂಕರನಾರಾಯಣರು ಅಂದು ಜಾರಿಗೊಳಿಸಿದ ಆ ತೀರ್ಪನ್ನು ನ್ಯಾಯಾಲಯ ಕೂಡ ಕಣ್ಣುಮುಚ್ಚಿ ಸರಿ ಎಂದಿತ್ತು
ಅಹಮದ್ ಕೋಯಾ ನಂತಹ ಅತ್ಯಾಚಾರಿ ಕೊಲೆಗಾರರಿರುವ ಈ ಜಗತ್ತಿನಲ್ಲಿ ಶಂಕರನಾರಾಯಣರಂತಹ ಸಂಹಾರಿಗಳು ಇರಲೇ ಬೇಕು ಎಂಬುದನ್ನು ಅಂದು ನ್ಯಾಯಾಲಯವೂ ಮನಗಂಡಿತ್ತು.
ಪಿ ಮೊಯಿಲಿ
ಸಂಗ್ರಹ

Share