April-19-2025

ಪ್ರಜಾಪ್ರಭುತ್ವದ ಆಶಯಗಳ ಪ್ರತಿಬಿಂಬ"ವೇ ಕಾಂತರಾಜು – ಜಯಪ್ರಕಾಶ್ ಹೆಗ್ಡೆ ಆಯೋಗದ ಸಾಮಾಜಿಕ- ಶೈಕ್ಷಣಿಕ ಸಮೀಕ್ಷಾ ವರದಿ!
ಜಾತಿ ತಾರತಮ್ಯ"ದ ಸಮಾಜದ ರಚನೆ ಶತಶತಮಾನಗಳಿಂದ ವಿವಿಧ ವರ್ಗಗಳ ನಡುವೆ ಅಸಮಾನತೆಯ ಗೋಡೆಗಳನ್ನು ಕಟ್ಟಿಕೊಂಡಿದೆ. ಈ ಗೋಡೆಗಳು ಕೆಲವರಿಗೆ ಮಾತ್ರವೇ ಬೆಳಕು ತಲುಪುವಂತೆ ಮಾಡಿವೆ, ಉಳಿದವರಿಗೆ ಕತ್ತಲೆಯೊಳಗಿನ ಬದುಕನ್ನು ಮಾತ್ರ ಕೊಟ್ಟಿದೆ. ಇಂತಹ ಸಂದರ್ಭದಲ್ಲೇ, ಕಾಂತರಾಜು ಮತ್ತು ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗವು ಸಾಮಾಜಿಕ- ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ) ಯ ಹೆಸರಲ್ಲಿ ಸಮಾಜದ ತಳಮಟ್ಟದ ಬಿಂಬವನ್ನೇ ಹತ್ತಿರದಿಂದ ವೀಕ್ಷಿಸಿ, ವರದಿ ನೀಡಿದೆ.
ಈ ಸಮೀಕ್ಷೆಯ ಉದ್ದೇಶ, ಸಮಾಜದಲ್ಲಿ ಯಾವ ವರ್ಗಗಳು ಇನ್ನೂ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂಬುದನ್ನು ಹೊರತರುವುದಾಗಿದೆ. ಶಿಕ್ಷಣ, ಉದ್ಯೋಗ, ಬದುಕಿನ ಗುಣಮಟ್ಟ, ಸಾಮಾಜಿಕ ಸ್ಥಾನಮಾನ ಇವೆಲ್ಲವನ್ನೂ ಅಳೆಯುವ ನಿಖರವಾದ ದರ್ಪಣವಾಗಿದೆ ಈ ವರದಿ.
ಇದು ಕೇವಲ ಅಕ್ಷರಗಳ, ಶಬ್ದಗಳ, ವಾಕ್ಯಗಳ ವರದಿ ಅಲ್ಲ– ಇದು ನೋವಿನ ನೋಟ, ಬದಲಾವಣೆಯ ಬೆಳಕು, ಹಾಗೂ ನ್ಯಾಯಕ್ಕಾಗಿ ಆಗ್ರಹ ಕೂಡಾ ಆಗಿದೆ.
90 ರ ದಶಕದ ಆರಂಭದಲ್ಲಿ ದೊಡ್ಡ ಮಟ್ಟದಲ್ಲಿ ಶಿಕ್ಷಣ ಕ್ರಾಂತಿ ಕರ್ನಾಟಕದಲ್ಲಿ ಸಂಭವಿಸಿತು. ಉನ್ನತ ಶಿಕ್ಷಣ ಕೇವಲ ಹಣವಂತರ ಮತ್ತು ಪ್ರತಿಷ್ಠಿತರ ಪಾಲಾಗಿತ್ತು. ಶಿಕ್ಷಣ ಸಂಸ್ಥೆಗಳ ಮಾಲೀಕರು ಗಲ್ಲಾ ಪೆಟ್ಟಿಗೆಗಳ ಮೇಲೆ ಕುಳಿತು ಅತಿ ಹೆಚ್ಚಿನ ಬಿಡ್ಡುದಾರರಿಗೆ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಸೀಟುಗಳನ್ನು ಬಿಕರಿ ಮಾಡುತ್ತಿದ್ದರು. ವಿವೇಚನಾ ಕೋಟಾ ಹೆಸರಲ್ಲಿ ಕೆಲವು ಸೀಟುಗಳನ್ನು ಗಿಟ್ಟಿಸುತ್ತಿದ್ದ ರಾಜಕಾರಣಿಗಳು ಕಣ್ಣು ಮುಚ್ಚಿ ಕುಳಿತುಕೊಂಡಿದ್ದರು. ಇದೇ ವೇಳೆ ಟಿ.ಎಂ.ಎ.ಪೈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಕ್ಯಾಪಿಟೇಷನ್ ಶುಲ್ಕವನ್ನು ನಿಷೇಧಿಸಿತು. ಈ ಅವಕಾಶವನ್ನು ದೇಶದಲ್ಲಿಯೇ ಮೊದಲ ಬಾರಿಗೆ ಬಳಸಿಕೊಂಡು ಅವಕಾಶ ವಂಚಿತರ ನೆರವಿಗೆ ಧಾವಿಸಿದವರು ಮುಖ್ಯ ಮಂತ್ರಿ ವೀರಪ್ಪ ಮೊಯ್ಲಿ. ಅವರು ಇಡೀ ದೇಶಕ್ಕೇ ಮಾದರಿಯಾದ ಸಾಮಾನ್ಯಪ್ರವೇಶ ಪರೀಕ್ಷೆ (ಸಿ ಇ ಟಿ)ವ್ಯವಸ್ಥೆಯನ್ನು ರೂಪಿಸಿದರು. ಮೀಸಲಾತಿಯ ರೋಸ್ಟರ್, ಸೀಟ್ ಮ್ಯಾಟ್ರಿಕ್ಸ್ ಮತ್ತು ಕೈಗೆಟಕುವ ಶುಲ್ಕವನ್ನೊಳಗೊಂಡ ಪಾರದರ್ಶಕ ವ್ಯವಸ್ಥೆ ಜಾರಿಗೆ ಬಂದಿತು. ಸಿ.ಇ.ಟಿ ಘಟಕದ ಆವರಣದಲ್ಲಿ ಠಳಾಯಿಸುತ್ತಿದ್ದ ಶಿಕ್ಷಣ ಸಂಸ್ಥೆಗಳ ಬ್ರೋಕರ್ ಮತ್ತು ಏಜೆಂಟ್ ಗಳನ್ನು ಬಂಧಿಸುವಂತೆ ಸಿ.ಇ.ಟಿ ಮುಖ್ಯಸ್ಥ ಬಿ. ಎ.ಹರೀಶ್ ಗೌಡರು ಪೊಲೀಸರಿಗೆ ಸೂಚಿಸಿದರು. ಸಿ.ಇ.ಟಿ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳು ನಿರಾತಂಕದಿಂದ ಭಾಗವಹಿಸುವ ವಾತಾವರಣ ನಿರ್ಮಾಣವಾಯಿತು. ಈ ಮೂಲಕ, ಮೊಯ್ಲಿಯವರು ಉನ್ನತ ಶಿಕ್ಷಣಕ್ಕೆ ಅಂಟಿದ್ದ ಪ್ರತಿಷ್ಠೆಯ ಹಣೆ ಪಟ್ಟಿಯನ್ನು ಕಳಚಿ ಅದನ್ನು ಡಿಗ್ಲಾಮರೈಸ್(deglamourise ) ಮಾಡಿ ಬಿಟ್ಟರು.
ರಾಜಕಾರಣದ ಫ್ಯೂಡಲ್ ಶಕ್ತಿಗಳು "ಕೈ "ಜೋಡಿಸಿದ್ದರಿಂದ ಮುಖ್ಯಮಂತ್ರಿಯವರ ವಿರುದ್ಧ ಭಿನ್ನಮತೀಯ ಚಟುವಟಿಕೆ ತಾರಕಕ್ಕೆ ಏರಿ ತನ್ನ ಸರ್ಕಾರಕ್ಕೆ ಸಂಚಕಾರ ಬಂದು ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಯುವ ಪರಿಸ್ಥಿತಿ ಬರಬೊಹುದು ಎಂದು ಗೊತ್ತಿದ್ದರೂ ವೀರಪ್ಪ ಮೊಯಿಲಿಯವರು ಯಾವುದಕ್ಕೂ ಜಗ್ಗದೆ ಅವರು ಇಡೀ ದೇಶಕ್ಕೇ ಮಾದರಿಯಾದ ಸಾಮಾನ್ಯಪ್ರವೇಶ ಪರೀಕ್ಷೆ (ಸಿ ಇ ಟಿ) ವ್ಯವಸ್ಥೆಯನ್ನು ರೂಪಿಸಿ, ದಲಿತರು, ಹಿಂದುಳಿದವರು, ರೈತರು, ಕಾರ್ಮಿಕರು, ಕಡುಬಡವರು ಮತ್ತು ಮಧ್ಯಮ ವರ್ಗದವರ ಮಕ್ಕಳಿಗೆ ಮೊದಲ ಬಾರಿಗೆ ಡಾಕ್ಟರು ಮತ್ತು ಇಂಜಿನಿಯರ್ ಆಗುವ ಕನಸುಗಳಿಗೆ ಅವಕಾಶ ಮಾಡಿ ಕೊಟ್ಟರು.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ) ಸಂಬಂಧಿಸಿದಂತೆ ಎಚ್.ಕಾಂತರಾಜ ಆಯೋಗದ ವರದಿಯು ವೈಜ್ಞಾನಿಕವಾಗಿಯೇ ಇದ್ದು, ಅದನ್ನು ಸರ್ಕಾರವು ಯಥಾವತ್ತಾಗಿ ಅಂಗೀಕರಿಸಬೇಕು ಮತ್ತು ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಬೇಕು’. ದಿನದಿಂದ ದಿನಕ್ಕೆ ಸರ್ಕಾರ ಈ ವರದಿಯನ್ನು ಮಂಡನೆ ಮಾಡಲು ಮೀನಾಮೇಶ ಎಣಿಸುತ್ತಿದ್ದು ಸರ್ಕಾರ ಶೋಷಿತ ಸಮುದಾಯಗಳಿಗೆ ಮಾಡುತ್ತಿರುವಂತಹ ದೂರಣಯಾಗಿದೆ. ಕಾಲದಿಂದಲೂ ಕೂಡ ಬಲಿಷ್ಠ ಸಮುದಾಯಗಳು ಸರ್ಕಾರದ ಎಲ್ಲಾ ಸೌಲತ್ತುಗಳನ್ನು ಅಥವಾ ಸಾಮಾಜಿಕ ಸೌಲಭ್ಯಗಳನ್ನು ಪಡೆಯುತ್ತಾ ಬಂದಿದೆ. ಇನ್ನು ಮುಂದಾದರೂ ಶೋಷಿತ ಅಲ್ಪಸಂಖ್ಯಾತ ಹಾಗೂ ಹಿಂದುಳಿದ ಸಮುದಾಯಗಳಿಗೆ ಹಾಗೂ ಈ ಮಕ್ಕಳ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಸರ್ಕಾರ ಈ ಕೂಡಲೇ ವರದಿಯನ್ನು ಜಾರಿಗೆ ಮಾಡಲೇಬೇಕೆಂದು
ಎಂದು ಪ್ರಧಾನ ಕಾರ್ಯದರ್ಶಿ ಕರ್ನಾಟಕ ಹಿಂದುಳಿದ ಜಾತಿಗಳ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಸಂಚಾಲಕರಾದ ಎಣ್ಣೆಗೆರೆ ಆರ್.ವೆಂಕಟರಾಮಯ್ಯ ಒತ್ತಾಯಿಸಿದ್ದಾರೆ.
ಪ್ರಜಾಪ್ರಭುತ್ವದ ಮೂಲ ಗುರಿಯಾದ ‘ದೇಶದ ಅಷ್ಟೂ ಸಂಪನ್ಮೂಲಗಳನ್ನು ದೇಶದ ಅಷ್ಟೂ ಜನರಿಗೆ ಸಮಾನವಾಗಿ ಹಂಚಿಕೆ ಮಾಡುವುದು’ ಈ ಸಮೀಕ್ಷೆಯ ಅಂತಿಮ ಆಶಯವಾಗಿದ್ದು, ಅದು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ಆಡಳಿತಾತ್ಮಕ ವ್ಯವಸ್ಥೆಗೆ ನೂತನ ದಿಕ್ಕು ತೋರಿಸಲಿದೆ.
ವೀರಪ್ಪ ಮೊಯಿಲಿಯವರು ತನ್ನ ದಿಟ್ಟ ನಿರ್ಧಾರದಿಂದ ಶಿಕ್ಷಣ ಕ್ಷೇತ್ರದಲ್ಲಿ (ಸಿ ಇ ಟಿ) ವ್ಯವಸ್ಥೆಯನ್ನು ರೂಪಿಸಿ ಶಿಕ್ಷಣ ಕ್ರಾಂತಿ ಮಾಡಿದಂತೆ, ಸಿದ್ದರಾಮಯ್ಯನವರು, ತನ್ನ ಮುಖ್ಯಮಂತ್ರಿ ಕುರ್ಚಿಗೆ ಅಂಟಿ ಕೊಳ್ಳದೆ, ಬಲಿಷ್ಠ ಸಮುದಾಯಗಳ ಬೆದರಿಕೆಗೆ ಅಂಜದೆ ಎಚ್.ಕಾಂತರಾಜ ಆಯೋಗದ ವರದಿಯನ್ನು ಯಥಾವತ್ತಾಗಿ ಅಂಗೀಕರಿಸಿ ಮತ್ತು ಶಿಫಾರಸುಗಳನ್ನು ಅನುಷ್ಠಾನಕ್ಕೆ ತಂದು ಶೋಷಿತ ವರ್ಗಕ್ಕೆ ನ್ಯಾಯಯುತ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಅವಕಾಶಗಳ್ಳನ್ನು ನೀಡಿದಲ್ಲಿ, ಇತಿಹಾಸದ ಪುಟಗಳಲ್ಲಿ ಸಿದ್ದರಾಮಯ್ಯನವರ ಹೆಸರು ಅಜರಾಮರವಾಗುವುದು.
ಪಿ ಮೊಯಿಲಿ

Share